ನಮಸ್ಕಾರ, ನಾನು ಸುರೇಶ ಎನ್, ವರ್ಡ್ಪ್ರೆಸ್ ಫೋಟೋಗಳ ತಂಡದಲ್ಲಿ ಕೊಡುಗೆದಾರನಾಗಿದ್ದೇನೆ ಮತ್ತು ನಾನು ನಿಮ್ಮ ಸ್ವಂತ ಫೋಟೋಗಳನ್ನು ವರ್ಡ್ಪ್ರೆಸ್ ಡೈರೆಕ್ಟರಿಗೆ ಹೇಗೆ ಸಲ್ಲಿಸಬಹುದು ಎಂಬುದನ್ನು ನಿಮಗೆ ತೋರಿಸಲು ಬಯಸುತ್ತೇನೆ. ಇದು ತುಂಬಾ ಸುಲಭ ಮತ್ತು ಇದು ತುಂಬಾ ಸ್ನೇಹಪರ ಸಮುದಾಯವಾಗಿದೆ.
ನಾನು ಇಲ್ಲಿ ಟೈಪ್ ಮಾಡುತ್ತಾ ಇದ್ದಂತೆ, ಪ್ರಪಂಚದಾದ್ಯಂತ 13,029 ಫೋಟೋಗಳನ್ನು ಮುಕ್ತವಾಗಿ ಸಲ್ಲಿಸಲಾಗಿದೆ.
ಮೊದಲಿಗೆ wordpress.org ಗೆ ಹೋಗಿ ಮತ್ತು ಅಲ್ಲಿ ಸಮುದಾಯ ಮತ್ತು ಫೋಟೋ ಡೈರೆಕ್ಟರಿಗಾಗಿ ಇರುವ ಆಯ್ಕೆಗಳನ್ನು ಆರಿಸಿಕೊಳ್ಳಿ.
ಒಮ್ಮೆ ನೀವು ಅದನ್ನು ಮಾಡಿದ ನಂತರ, ನೀವು ಈ ಪರದೆಗೆ ಬರುತ್ತೀರಿ. ಮೇಲಿನ ಬಲ ಮೂಲೆಯಲ್ಲಿ, ನೀವು ಲಾಗ್ ಇನ್ ಮಾಡಲು ಅಥವಾ ನೋಂದಾಯಿಸಲು ಆಯ್ಕೆ ಮಾಡಿಕೊಳ್ಳುತ್ತೀರಿ.
ನಿಮ್ಮ ಸ್ವಂತ ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ಬಳಸಿ wordpress.org ನಲ್ಲಿ ಲಾಗ್ ಇನ್ ಮಾಡಿ.
ನೀವು ಇನ್ನೂ ಖಾತೆಯನ್ನು ಹೊಂದಿಲ್ಲದಿದ್ದರೆ, ನೀವು ಮೊದಲು ನೋಂದಾಯಿಸಿಕೊಳ್ಳಬೇಕು. ಇದು ನಿಜವಾಗಿಯೂ ತ್ವರಿತ ಮತ್ತು ಮಾಡಲು ಸುಲಭವಾಗಿದೆ.
ಒಮ್ಮೆ ಲಾಗ್ ಇನ್ ಮಾಡಿದ ನಂತರ, ನಿಮ್ಮ ಸ್ವಂತ ಫೋಟೋಗಳನ್ನು ಕೊಡುಗೆಯಾಗಿ ಆಯ್ಕೆ ಮಾಡಲು ನಿಮಗೆ ಸಾಧ್ಯವಾಗುತ್ತದೆ. ಕೊಡುಗೆ (contribute) ಲಿಂಕ್ ಅನ್ನು ಒತ್ತಿರಿ.
ಈಗ, ನೀವು ನಿಮ್ಮ ಸ್ವಂತ ಫೋಟೋಗಳನ್ನು ಸಲ್ಲಿಸಲು ಪ್ರಾರಂಭಿಸುವ ಮೊದಲು, ನಾವು ಮಾರ್ಗಸೂಚಿಗಳು ಮತ್ತು ಪದೇ ಪದೇ ಕೇಳಲಾಗುವ ಪ್ರಶ್ನೆ(FAQ)ಗಳನ್ನು ಓದಲು ನಿಮ್ಮನ್ನು ಕೇಳಿ ಕೊಳ್ಳುತ್ತೇವೆ.
ನಾವು ಸ್ವೀಕರಿಸಲು ಬಯಸುವ ಮತ್ತು ಸ್ವೀಕರಿಸದ ಫೋಟೋಗಳ ಪ್ರಕಾರದ ಬಗ್ಗೆ ಮಾರ್ಗಸೂಚಿಗಳು ನಿಮಗೆ ಒಳ್ಳೆಯ ಕಲ್ಪನೆಯನ್ನು ನೀಡುತ್ತದೆ!
ಪದೇ ಪದೇ ಕೇಳಲಾಗುವ ಪ್ರಶ್ನೆಗಳು, ಫೋಟೋ ಡೈರೆಕ್ಟರಿಯ ಬಗ್ಗೆ ಸ್ವಲ್ಪ ಹಿನ್ನೆಲೆ ನೀಡುತ್ತದೆ.
ಹಾಗಿದ್ದರೆ ನಾವೀಗ ಪ್ರಾರಂಭಿಸೋಣ!
ನಿಮ್ಮ ಮೊದಲ ಫೋಟೋವನ್ನು ಅಪ್ಲೋಡ್ ಮಾಡಲು, ಫೈಲ್ ಆಯ್ಕೆ ಬಟನ್ ಅನ್ನು ಬಳಸಿಕೊಂಡು ನಿಮ್ಮ ಕಂಪ್ಯೂಟರ್, ಹಾರ್ಡ್ ಡ್ರೈವ್ ಅಥವಾ ಮೊಬೈಲ್ ಫೋನ್ನಿಂದ ಒಂದನ್ನು ಆಯ್ಕೆಮಾಡಿ.
ನಂತರ ಪರ್ಯಾಯ ಪಠ್ಯ(Alt text)ವನ್ನು ಸೇರಿಸಿ.
ಪರ್ಯಾಯ ಪಠ್ಯವು ಸಾಧ್ಯವಾದಷ್ಟು ವಿವರಣಾತ್ಮಕವಾಗಿರಬೇಕು, ಏಕೆಂದರೆ ಇದು ದೃಷ್ಟಿ ಇಲ್ಲದವರ ಪ್ರಯೋಜನಕ್ಕಾಗಿ.
ಒಮ್ಮೆ ನೀವು ಅದನ್ನು ಮಾಡಿದ ನಂತರ, ಎಲ್ಲಾ ಬಾಕ್ಸ್ಗಳನ್ನು ಟಿಕ್ ಮಾಡುವ ಮೂಲಕ ಪರವಾನಗಿ ಮತ್ತು ಬಳಕೆಗೆ ಸಂಬಂಧಿಸಿದ ಎಲ್ಲಾ ಆಯ್ಕೆಗಳನ್ನು ನೀವು ಖಚಿತಪಡಿಸಬೇಕಾಗುತ್ತದೆ. ಹಾಗೆ ಮಾಡುವಾಗ ನೀವು ಸಲ್ಲಿಸು ಬಟನ್ ಅನ್ನು ಒತ್ತುವ ಮೊದಲು ಪಟ್ಟಿಯಲ್ಲಿರುವ ಪ್ರತಿಯೊಂದು ವಿಷಯಕ್ಕೂ ನಿಮ್ಮ ತ್ವರಿತ ಒಪ್ಪಂದವನ್ನು ನೀಡುತ್ತಿರುವಿರಿ. ಇದು ನಿಜವಾಗಿಯೂ ಮುಖ್ಯವಾಗಿದೆ!
ನಿಮ್ಮ ಸಂಪರ್ಕದ ವೇಗವನ್ನು ಅವಲಂಬಿಸಿ ನಿಮ್ಮ ಫೋಟೋವನ್ನು ಅಪ್ಲೋಡ್ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಸಾಮಾನ್ಯವಾಗಿ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.
ನಿಮ್ಮ ಫೋಟೋವನ್ನು ಸಲ್ಲಿಸಿದ ನಂತರ, ನಿಮ್ಮನ್ನು ಸಲ್ಲಿಕೆಗಳ ಪರದೆಗೆ ಕರೆದೊಯ್ಯಲಾಗುತ್ತದೆ. ಇಲ್ಲಿ ಮಾಡರೇಶನ್ಗಾಗಿ ಸರದಿಯಲ್ಲಿರುವ ಫೋಟೋಗಳನ್ನು ನೀವು ಕಾಣಬಹುದು. ಈ ಸಮಯದಲ್ಲಿ ನೀವು ಇಲ್ಲಿ ಮಾಡರೇಶನ್ಗಾಗಿ ನನ್ನ ಬಳಿ ಮೂರು ಫೋಟೋಗಳು ಕಾಯುತ್ತಿರುವುದನ್ನು ನೋಡಬಹುದು.ಯಾವುದೇ ಒಂದು ಸಮಯದಲ್ಲಿ ಮಾಡರೇಶನ್ಗಾಗಿ ಕಾಯುತ್ತಿರುವ ಐದು ಫೋಟೋಗಳನ್ನು ಹೊಂದಲು ಸಾಧ್ಯವಿದೆ.
ನಿಮ್ಮ ಫೋಟೋವನ್ನು ಮಾಡರೇಟ್ ಮಾಡಿದ ನಂತರ, ಅದನ್ನು ಸ್ವೀಕರಿಸಲಾಗಿದೆಯೇ ಅಥವಾ ನಿರಾಕರಿಸಲಾಗಿದೆಯೇ ಎಂದು ಹೇಳುವ ಇಮೇಲ್ ಅನ್ನು ನೀವು ಸ್ವೀಕರಿಸುತ್ತೀರಿ.
ನಿರಾಕರಣೆಗಳನ್ನು ಕಡಿಮೆ ಮಾಡಲು ಸಲ್ಲಿಕೆ ಮಾರ್ಗಸೂಚಿಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ.
ನೀವು ಡೈರೆಕ್ಟರಿಯಲ್ಲಿ ಕೆಲವು ಫೋಟೋಗಳನ್ನು ಸ್ವೀಕರಿಸಿದಾಗ, ನಿಮ್ಮ ಸ್ವಂತ ಛಾಯಾಚಿತ್ರಗಳನ್ನು ವೀಕ್ಷಿಸಲು ನೀವು ಆರ್ಕೈವ್ ಲಿಂಕ್ ಅನ್ನು ಹೊಂದಿರುತ್ತೀರಿ.
ಅವು ಗ್ಯಾಲರಿ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ.
ಇದೋ ನೋಡಿ ನನ್ನವುಗಳ ಒಂದು ಪಕ್ಷಿನೋಟ.
ವರ್ಡ್ಪ್ರೆಸ್ ಫೋಟೋ ಡೈರೆಕ್ಟರಿಗೆ ಹೆಚ್ಚಿನ ಜನರು ತಮ್ಮ ಫೋಟೋಗಳನ್ನು ಕೊಡುಗೆ ನೀಡಲು ನಾವು ನಿಜವಾಗಿಯೂ ಎದುರುನೋಡುತ್ತಿದ್ದೇವೆ ಮತ್ತು ಶೀಘ್ರದಲ್ಲೇ ನಿಮ್ಮಿಂದ ಕೆಲವನ್ನು ಸ್ವೀಕರಿಸಲು ನಾವು ಎದುರು ನೋಡುತ್ತಿದ್ದೇವೆ.